ಬೆಂಗಳೂರು: ಐಪಿಸಿ, ಸಿಆರ್ಪಿಸಿ, ಇಂಡಿಯನ್ ಎವಿಡೆನ್ಸ್ ಆಕ್ಟ್ ಗಳ ಜಾಗದಲ್ಲಿ ಬಿಎನ್ಎಸ್, ಬಿಎನ್ಎಸ್ಎಸ್, ಬಿಎಸ್ಎ ಬಂದ ನಂತರ ಹಳೆಯ ಸೆಕ್ಷನ್ ಗಳಿಗೆ ಪರ್ಯಾಯವಾಗಿ ರೂಪಿಸಿರುವ ಹೊಸ ಸೆಕ್ಷನ್ ಗಳನ್ನು ಹುಡುಕಿಕೊಳ್ಳುವುದು ಜನ ಸಾಮಾನ್ಯರಿಗಷ್ಟೇ ಅಲ್ಲ ಕಾನೂನು ಕ್ಷೇತ್ರದೊಂದಿದೆ ದೈನಂದಿನ ಒಡನಾಟ ಹೊಂದಿರುವ ವಕೀಲರಿಗೂ, ಪೊಲೀಸರಿಗೂ, ಕಕ್ಷೀದಾರರಿಗೂ ಕಷ್ಟವಾಗುತ್ತಿದೆ.
ಈ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಇದಕ್ಕೆ ಸಂಬಂಧಪಟ್ಟ ಮೂರು ಲಿಂಕ್ ಗಳನ್ನು ಸಿದ್ದಪಡಿಸಲಾಗಿದೆ. ಲಿಂಕ್ ಅನ್ನು ಒತ್ತಿದ ಬಳಿಕ ಕಾಣುವ ಖಾಲಿ ಬಾಕ್ಸ್ ನಲ್ಲಿ ಹಳೆಯ ಐಪಿಸಿ, ಸಿಆರ್ಪಿಸಿ ಅಥವಾ ಇಂಡಿಯನ್ ಎವಿಡೆನ್ಸ್ ನ ಸೆಕ್ಷನ್ ನಮೂದಿಸಿದರೆ ಹೊಸ ಸೆಕ್ಷನ್ ಯಾವುದು ಎಂಬುದನ್ನು ತೋರಿಸಿತ್ತದೆ. ವಕೀಲರ ಗುಂಪುಗಳಲ್ಲಿ ಹರಿದಾಡುತ್ತಿರುವ ಲಿಂಕ್ ಅನ್ನು ವಕೀಲರು, ಪೊಲೀಸರು, ಕಕ್ಷೀದಾರರಿಗೆ ಉಪಯೋಗವಾಗಲೆಂದು ಇಲ್ಲಿ ನೀಡಲಾಗಿದೆ. ಅಗತ್ಯವಿರುವ ಕಾಯ್ದೆಯ ಲಿಂಕ್ ಕ್ಲಿಕ್ ಮಾಡಿದ ನಂತರ ಹಳೆಯ ಸೆಕ್ಷನ್ ನಮೂದಿಸಿದರೆ ಹೊಸ ಸೆಕ್ಷನ್ ಯಾವುದೆಂದು ತೋರಿಸಲಿದೆ.
CrPC/BNNS (ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ)
IEA/BSA (ಭಾರತೀಯ ಸಾಕ್ಷ್ಯ ಅಧಿನಿಯಮ್)