ಬೆಂಗಳೂರು: ‘ಅರ್ಹ ಪ್ರಕರಣ’ಗಳಲ್ಲಿ ಸಂತ್ರಸ್ತರಿಗೆ ‘ಲಾ ಟೈಮ್’ ವತಿಯಿಂದ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಪ್ರಸ್ತುತ ಈ ಸೇವೆ ಬೆಂಗಳೂರಿಗೆ ಸೀಮಿತವಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಭೇಟಿ ನೀಡಬಹುದು. ಕಚೇರಿ ವಿಳಾಸಕ್ಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಸೂಚನೆ: ಉಚಿತ ಕಾನೂನು ನೆರವನ್ನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ತಮ್ಮ ತಪ್ಪಿಲ್ಲದೆ/ಅರಿವಿಲ್ಲದೆ ಕಾನೂನು ಸಂಕಷ್ಟಕ್ಕೆ ಸಿಲುಕಿರುವವರಿಗೆ, ನೈಜ ದೂರುದಾರರಿಗೆ, ಸಾಮಾಜಿಕ ಕಾಳಜಿ ಹಿನ್ನೆಲೆಯಲ್ಲಿ ಹೋರಾಟ ಮಾಡುವವರಿಗೆ ನೀಡಲಾಗುವುದು. ಕಚೇರಿಗೆ ಭೇಟಿ ನೀಡುವ ಮುನ್ನ Contact Us ಪೇಜ್ ನಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿ, ಸಮಯ ನಿಗದಿ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ಬರಬೇಕು. ಸಮಯದ ಅಭಾವ ಕಾರಣದಿಂದಾಗಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಫೋನಿನಲ್ಲಿ ಚರ್ಚೆಗೆ ಅವಕಾಶ ಇರುವುದಿಲ್ಲ. ಭೇಟಿಯ ಬಳಿಕ ಪ್ರಕರಣ ಅರ್ಹವಿದೆ ಎನ್ನಿಸಿದಲ್ಲಿ ಶುಲ್ಕರಹಿತ ಕಾನೂನು ನೆರವು ನೀಡಲಾಗುವುದು.