News

ಇಂದಿನಿಂದ ಜನವರಿ 1ರವರೆಗೆ ಹೈಕೋರ್ಟ್ ರಜೆ: ರಜಾಕಾಲದ ಪೀಠಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆ

Share It

ರಾಜ್ಯ ಹೈಕೋರ್ಟ್‌ ಗೆ ಇದೇ ಡಿಸೆಂಬರ್‌ 19ರಿಂದ ಡಿಸೆಂಬರ್‌ 31ರವರೆಗೆ ಚಳಿಗಾಲದ ರಜೆ ಘೋಷಿಸಲಾಗಿದೆ.

ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಎಂ. ಚಂದ್ರಶೇಖರ ರೆಡ್ಡಿ ನೋಟಿಫಿಕೇಷನ್ ಹೊರಡಿಸಿದ್ದಾರೆ. ಅದರಂತೆ, ಇಂದಿನಿಂದ ಜನವರಿ 1 ರವರೆಗೆ ಹೈಕೋರ್ಟ್ ಗೆ ರಜೆ ಇರಲಿದೆ.

ರಜಾಕಾಲದ ಪೀಠಗಳು: ರಜೆ ಅವಧಿಯ ನಡುವೆ ನಾಲ್ಕು ದಿನ ತುರ್ತು ಪ್ರಕರಣಗಳನ್ನು ರಜಾಕಾಲೀನ ಪೀಠಗಳು ವಿಚಾರಣೆ ನಡೆಸಲಿವೆ. ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸುವುದಿಲ್ಲ. ಇಲ್ಲಿನ ಪ್ರಕರಣಗಳ ತುರ್ತು ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿ ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಇನ್ನೂ ಬೆಂಗಳೂರು ಪೀಠದಲ್ಲಿ ಹೈಬ್ರಿಡ್‌ ವಿಧಾನದಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದು ನೋಟಿಫಿಕೇಷನ್ ನಲ್ಲಿ ತಿಳಿಸಲಾಗಿದೆ.

ರಜಾಕಾಲದ ಹೈಕೋರ್ಟ್‌ ಪೀಠಗಳು ಡಿಸೆಂಬರ್‌ 20, 22, 27 ಮತ್ತು 29ರಂದು ಕರ್ತವ್ಯ ನಿರ್ಹಿಸಲಿವೆ. ಈ ನಾಲ್ಕು ದಿನಗಳಲ್ಲಿ ತಲಾ ಒಂದು ವಿಭಾಗೀಯ ಪೀಠ ಹಾಗೂ 3 ಏಸಕದಸ್ಯ ಪೀಠಗಳು ಕ್ರಮವಾಗಿ 8, 9, 10 ಮತ್ತು 11 ನೇ ಕೋರ್ಟ್ ಹಾಲ್ ಗಳಲ್ಲಿ ವಿಚಾರಣೆ ನಡೆಸಲಿವೆ.

ತಡೆಯಾಜ್ಞೆ, ಮಧ್ಯಂತರ ನಿರ್ದೇಶನ, ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಪ್ರಕರಣಗಳನ್ನು ಮಾತ್ರ ರಜಾಕಾಲೀನ ಪೀಠಗಳು ವಿಚಾರಣೆ ನಡೆಸಲಿವೆ. ಮೇಲ್ಮನವಿ, ಅರ್ಜಿ ಅಥವಾ ಮನವಿ ಮತ್ತು ಬೇರಾವುದೇ ಸಿವಿಲ್‌ ರೂಪದ ಪ್ರಕರಣಗಳನ್ನು ನ್ಯಾಯಾಲಯ ವಿಚಾರಣೆ ನಡೆಸುವುದಿಲ್ಲ ಎಂದು ನೋಟಿಫಿಕೇಷನ್ ನಲ್ಲಿ ಸ್ಪಷ್ಟಪಡಿಸಲಾಗಿದೆ.


Share It

You cannot copy content of this page