ದೆಹಲಿ: ಬಿ.ಎಡ್.(Bachelor of Education) ಪದವೀಧರರು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಹರಲ್ಲ ಎಂಬ ರಾಜಸ್ಥಾನ ಹೈಕೋರ್ಟ್ ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಅನಿರುಧ್ ಬೋಸ್ ಹಾಗೂ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಭಾರತ ಸಂವಿಧಾನದ ವಿಧಿ 21ಎ ಹಾಗೂ 2009 ರ ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳ ಪ್ರಕಾರ 14 ವರ್ಷದ ಒಳಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ‘ಉಚಿತ’ ಮತ್ತು ‘ಕಡ್ಡಾಯ’ ಅಷ್ಟೇ ಅಲ್ಲ. ‘ಗುಣಮಟ್ಟ’ದ ಶಿಕ್ಷಣ ಕೂಡ ನೀಡಬೇಕೆಂದು ಹೇಳುತ್ತವೆ.
ಬಿಎಡ್ ಪದವೀಧರರು ಪ್ರಾಥಮಿಕ ಶಾಲೆ (1 ರಿಂದ 5ನೇ ತರಗತಿ) ವಿದ್ಯಾರ್ಥಿಗಳಿಗೆ ಕಲಿಸಲು ಅಗತ್ಯ ಇರುವ ಬೇಸಿಕ್ ಪೆಡಗಾಜಿ ವಿಷಯ ಪಾಸು ಮಾಡಿರುವುದಿಲ್ಲ. ಹೀಗಾಗಿ ಭೋದನಾಶಾಸ್ತ್ರ (Basic Pedagogy) ವಿಷಯದಲ್ಲಿ ಉತ್ತೀರ್ಣರಾಗಿಲ್ಲದ ಬಿಎಡ್ ಪದವೀಧರರನ್ನು ಪ್ರಾಥಮಿಕ ಶಾಲಾ ಶಿಕ್ಷಕರ (1 ರಿಂದ 5 ನೇ ತರಗತಿ) ಹುದ್ದೆಗೆ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
(Civil Appeal No.5068/2023)