News

ಸಿಬಿಐ ಕೇಂದ್ರ ಸರ್ಕಾರದ ಪಂಜರದ ಗಿಳಿಯಾಗಬಾರದು: ಸುಪ್ರೀಂ ಕೋರ್ಟ್

Share It

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದ ಸಿಬಿಐ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಸಿಬಿಐ ಸಂಸ್ಥೆ ಕೇಂದ್ರ ಸರ್ಕಾರದ ಪಂಜರದ ಗಿಳಿಯಾಗಬಾರದು ಎಂದಿದೆ.

ಅರವಿಂದ್ ಕೇಜ್ರಿವಾಲ್ ಬಂಧನ ಹಿನ್ನೆಲೆಯನ್ನು ತೀರ್ಪಿನಲ್ಲಿ ಚರ್ಚಿಸಿರುವ ಸುಪ್ರೀಂ ಕೋರ್ಟ್, ಸಿಬಿಐ ಬಂಧನ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮಾರ್ಚ್‌ 2023ರಲ್ಲಿಯೇ ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಿದರೂ ಅವರನ್ನು ಸಿಬಿಐ ಬಂಧಿಸಲಿಲ್ಲ, ಬದಲಿಗೆ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಅವರ ಬಂಧನಕ್ಕೆ ತಡೆ ನೀಡಿದ ನಂತರವಷ್ಟೇ ಸಿಬಿಐ ಕ್ರಿಯಾಶೀಲವಾಯಿತು.

ಅದರಂತೆ 22 ತಿಂಗಳಿಗೂ ಹೆಚ್ಚು ಕಾಲ ಸುಮ್ಮನಿದ್ದ ಸಿಬಿಐ ತಕ್ಷಣವೇ ಕಾರ್ಯಪ್ರವೃತ್ತವಾಗಿ ಕೇಜ್ರಿವಾಲ್‌ ಅವರನ್ನು ವಶಕ್ಕೆ ನೀಡುವಂತೆ ಕೋರಿತು. ಸಿಬಿಐನ ಈ ಕ್ರಮ ಬಂಧನದ ಸಂದರ್ಭಗಳ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕುತ್ತದೆ. ಸಿಬಿಐ ಅರವಿಂದ ಕೇಜ್ರಿವಾಲ್ ಅವರನ್ನು ಬಂಧನ ಮಾಡಿದ್ದು ಕೇವಲ ಇ.ಡಿ. ಪ್ರಕರಣದಲ್ಲಿ ನೀಡಲಾದ ಜಾಮೀನನ್ನು ವಿಫಲಗೊಳಿಸಲಿಕ್ಕಾಗಿ ಎಂದು ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿದೆ.

ಅಲ್ಲದೇ, “ ಸಿಬಿಐ ಪಂಜರದ ಗಿಳಿ ಎನ್ನುವ ಭಾವನೆಯನ್ನು ತೊಡೆದು ಹಾಕಲು ಮುಂದಾಗಬೇಕು. ತಾನು ಬಂಧಮುಕ್ತ ಗಿಳಿ ಎಂದು ಸಿಬಿಐ ನಿರೂಪಿಸಬೇಕು. ಸಿಬಿಐ ನಡೆ ಸಂಶಾಯತೀತವಾಗಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಸಿಬಿಐಗೆ ಕಿವಿಮಾತು ಹೇಳಿದೆ.

ಇದೇ ವೇಳೆ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಟೀಕಿಸಿರುವ ಸುಪ್ರೀಂಕೋರ್ಟ್, ತನಿಖೆಗೆ ಸಹಕರಿಸುವುದು ಎಂದರೆ ಆರೋಪಿಯು ಪ್ರಾಸಿಕ್ಯೂಷನ್ ಬಯಸಿದ ರೀತಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಲ್ಲ. ಬಂಧನದ ಅಧಿಕಾರವನ್ನು ಮಿತವಾಗಿ ಬಳಸಬೇಕು. ಕಿರುಕುಳ ನೀಡಲೆಂದು ಕಾನೂನನ್ನು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಸುಪ್ರೀಂಕೋರ್ಟ್ ತನ್ನ ತೀರ್ಪಿನ 32 ಮತ್ತು 33ನೇ ಪ್ಯಾರಾದಲ್ಲಿ ಈ ಕೆಳಗಿನಂತೆ ಸಿಬಿಐ ನಡೆಯನ್ನು ಟೀಕಿಸಿದೆ ಮತ್ತು ಪಕ್ಷಾಪತವಿಲ್ಲದೆ ಮುಕ್ತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಿಬಿಐಗೆ ಕರೆ ನೀಡಿದೆ.

32. CBI is a premier investigating agency of the country. It is in public interest that CBI must not only be above board but must also be seem to be so. Rule of law, which is a basic feature of our constitutional republic, mandates that investigation must be fair, transparent and judicious. This Court has time and again emphasized that fair investigation is a fundamental right of an accused person under Articles 20 and 21 of the Constitution of India. Investigation must not only be fair but must be seem to be so. Every effort must be made to remove any perception that investigation was not carried out fairly and that the arrest was made in a high-handed and biased manner.

33. In a functional democracy governed by the rule of law, perception matters. Like Caesar’s wife, an investigating agency must be above board. Not so long ago, this Court had castigated the CBI comparing it to a caged parrot. It is imperative that CBI dispel the notion of it being a caged parrot. Rather, the perception should be that of an uncaged parrot.

(Criminal Appeal No. 3816 / 2024) (2024 INSC 687)


Share It

You cannot copy content of this page