News

ಹಳೆ ನೋಟು ಅಕ್ರಮ ಬದಲಾವಣೆ: ಕ್ಯಾಶಿಯರ್ ಗೆ 4 ವರ್ಷ ಜೈಲು

Share It

ಬೆಂಗಳೂರು: ಅಮಾನ್ಯೀಕರಣವಾಗಿದ್ದ ಹಳೆಯ ನೋಟುಗಳನ್ನು ಅಕ್ರಮವಾಗಿ ಬದಲಾವಣೆ ಮಾಡಿದ್ದ ಪ್ರಕರಣದಲ್ಲಿ ಬ್ಯಾಂಕ್ ಕ್ಯಾಶಿಯರ್ ಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನ ಕಲಬುರಗಿಯ ಶಾಖೆಯ ಕ್ಯಾರಿಯರ್ ಶ್ರೀಹರಿ ಕಮನ್ ಕರ್ ಶಿಕ್ಷೆಗೊಳಗಾಗಿರುವ ಬ್ಯಾಂಕ್ ನೌಕರ.

ಆರೋಪಿ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ಸ್ಪೆಷಲ್ ಕೋರ್ಟ್ ನ್ಯಾಯಾಧೀಶ ಎನ್. ಸುಬ್ರಹ್ಮಣ್ಯ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)ಡಿ ಹಾಗೂ ಐಪಿಸಿ ಸೆಕ್ಷನ್ 409 ಅಡಿ 4 ವರ್ಷ ಜೈಲು ಶಿಕ್ಷೆ ಮತ್ತು 60 ಸಾವಿರ ದಂಡ ವಿಧಿಸಲಾಗಿದೆ.

ಸರ್ಕಾರಿ ನೌಕರನಾಗಿ ಅಧಿಕಾರ ದುರುಪಯೋಗ ಮಾಡಿಕೊಂಡ ಮತ್ತು ವಿಶ್ವಾಸ ದ್ರೋಹ ಎಸಗಿದ ಆರೋಪವನ್ನು ಕ್ಯಾಶಿಯರ್ ವಿರುದ್ಧ ಹೊರಿಸಲಾಗಿತ್ತು

ಹಿನ್ನೆಲೆ: ಹಳೆಯ ನೋಟುಗಳ ವಿನಿಮಯಕ್ಕೆ ಸರ್ಕಾರ ನಿಷೇಧ ಹೇರಿದ ನಂತರವೂ ಕ್ಯಾಶಿಯರ್ ಸಾವಿರ ರೂಪಾಯಿ ಹಾಗೂ ಐನೂರು ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಟ್ಟಿದ್ದಾರೆ. ಈ ರೀತಿ 1.9 ಮೌಲ್ಯದ ಹಳೆಯ ನೋಟುಗಳನ್ನು ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂದು ಸಿಬಿಐನ ಎಸಿಬಿ ಘಟಕ ಪ್ರಕರಣ ದಾಖಲಿಸಿತ್ತು.

ಅಧಿಕಾರ ದುರುಪಯೋಗ ಮಾಡಿಕೊಂಡು ಆರ್ಬಿಐ ನಿಯಮಗಳನ್ನು ಗಾಳಿಗೆ ತೂರಿ ಹಳೆಯ ನೋಟುಗಳನ್ನು ಬದಲಿಸಿ, ಅಕ್ರಮ ಎಸೆಗಿದ್ದು ವಿಚಾರಣೆ ವೇಳೆ ಸಾಕ್ಷಾಧಾರಗಳಿಂದ ಸಾಬೀತಾಗಿತ್ತು.


Share It

You cannot copy content of this page