ಲೇಖಕರು: ಎಸ್. ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.
ನನ್ನ ತಿಳುವಳಿಕೆ ಬಂದಾಗಿನಿಂದ ನಾನು ಚುನಾವಣೆ ಗಳನ್ನು ನೀಡುತ್ತಾ ಬಂದಿದ್ದೇನೆ. ಅಲ್ಲದೇ ನಮ್ಮ ತಂದೆ ಕೂಡಾ ಆಗ ರಾಜಕೀಯದಲ್ಲಿ ಇದ್ದರು. ಆದರೆ ಎಪ್ಪತ್ತನೇ ಇಸ್ವಿ ವರೆಗೆ ಚುನಾವಣೆಗಳಲ್ಲಿ ಮತದಾರರಿಗೆ ಉಚಿತಗಳ ಯಾವ ಆಮಿಷ ಇರುತ್ತಿರಲಿಲ್ಲ ಮತ್ತು ಆಗ ರಾಜಕಾರಣಿಗಳು ಇಂದಿನ ಹಾಗೆ ಬೇಕಾಬಿಟ್ಟಿ ಹಣ ಸುರಿದು ಚುನಾವಣೆ ಗೆಲ್ಲುವ ಕಾಲ ಇರಲಿಲ್ಲ. ಯಾಕೆಂದರೆ ಆಗ ಚುನಾವಣೆಗೆ ನಿಲ್ಲುವವರು ದುಡ್ಡು ಇದ್ದರೂ ಒಮ್ಮೊಮ್ಮೆ ತಮ್ಮ ಆಸ್ತಿ ಮಾರಿ ಚುನಾವಣಾ ವೆಚ್ಚ ನಿರ್ವಹಿಸುತ್ತಿದ್ದರು. ಇನ್ನು ಮತದಾರರಿಗೆ ಹಣ ಕೊಟ್ಟು ಮತ ಕೊಳ್ಳುವ ವಾತಾವರಣ ಇರಲಿಲ್ಲ. ಹಾಗಂತ ದುಡ್ಡು ಕೊಟ್ಟು ಮತ ಪಡೆಯುತ್ತಿರಲಿಲ್ಲ ಅಂತ ಹೇಳಲಾಗದು. ಆದರೆ ದುಡ್ಡು ತೆಗೆದುಕೊಂಡು ಮತ ಹಾಕುವವರು ಅತೀ ಕಡಿಮೆ ಸಂಖ್ಯೆಯಲ್ಲಿ ಇದ್ದರು.
ಆಗ ಮತದಾರರು ಮುಗ್ಧರು ಮತ್ತು ನಿರಕ್ಷರಿಗಳು ಇದ್ದರು. ಆಗ ಆಣೆ ಪ್ರಮಾಣ ಮಾಡಿಸಿ ಅವರನ್ನು ಕಟ್ಟಿ ಹಾಕುವ ಕೆಲಸ ನಡೆಯುತ್ತಿತ್ತು. ಅಲ್ಲದೆ ಆಗ ಕಾಂಗ್ರೆಸ್ ಬಿಟ್ಟರೆ ಯಾವುದ ಪರ್ಯಾಯ ರಾಷ್ಟ್ರೀಯ ಪಕ್ಷ ಇರಲಿಲ್ಲ. ಚುನಾವಣೆ ಪ್ರಣಾಳಿಕೆಯಲ್ಲಿ ಈಗಿನಂತೆ ಯಾವದೇ ಉಚಿತ ಕೊಡುಗೆ ಬಗ್ಗೆ ಪ್ರಸ್ತಾಪ ಇರುತ್ತಿರಲಿಲ್ಲ. ಅಂದು ಸಾಕಷ್ಟು ಜನ ಕಡು ಬಡತನದಲ್ಲಿ ಇದ್ದರೂ ದುಡಿದು ತಿನ್ನುವ ಸ್ವಾಭಿಮಾನಿ ಆಗಿದ್ದರು.
1971 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗರೀಬಿ ಹಟಾವೋ ಎನ್ನುವ ಘೋಷಣೆ ಆಧಾರದಿಂದ ಕಾಂಗ್ರೆಸ್ ಪ್ರಚಂಡ ಬಹುಮತ ಪಡೆಯಿತು. ಅಷ್ಟೇ ಅಲ್ಲ ವಿರೋಧಿ ಪಕ್ಷಗಳು ಧೂಳಿಪಟ ಅದದ್ದು ಇತಿಹಾಸ. ಆಗ ಜನರು ಇಂದಿರಾಗಾಂಧಿ ಹೆಸರಿನಿಂದಲೇ ಮತ ಚಲಾಯಿಸಿದ್ದು ಆ ಅಭೂತಪೂರ್ಣ ಯಶಸ್ಸಿಗೆ ಕಾರಣ. ಇದು ಪ್ರಜಪ್ರಭುತ್ವದಲ್ಲಿ ವ್ಯಕ್ತಿ ಪೂಜೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.
ಈಗ ಚುನಾವಣೆ ಎಂದರೆ ಮತದಾನ ಅಲ್ಲ ಮತ ವಹಿವಾಟು ಅನ್ನುವ ಹಂತಕ್ಕೆ ಬಂದಿದೆ. ಇದರಲ್ಲಿ ಹಣ, ವಸ್ತು , ಆಮಿಷ ವಗೈರೆ ಇರುತ್ತವೆ. ಚುನಾವಣಾ ಆಯೋಗ ಒಬ್ಬ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಗರಿಷ್ಠ ಐವತ್ತು ಲಕ್ಷ ಖರ್ಚು ಮಾಡಲು ಮಿತಿ ನಿಗದಿಪಡಿಸಿದರೆ ವಾಸ್ತವ ಖರ್ಚು ಅದರ ಬೇರೆಯೇ ಇರುತ್ತದೆ. ಬಹಿರಂಗವಾಗಿ ಮತಕ್ಕೆ ಇಷ್ಟು ಸಾವಿರ ಕೊಡುತ್ತೇವೆ ಅಂತಾ ಘೋಷಿಸುವ ರಾಜಕಾರಣಿಗಳು ಚುನಾವಣಾ ವೆಚ್ಚದ ಕಾನೂನು ಮಿತಿಯ ಅವಹೇಳನ ಮಾಡುತ್ತಾರೆ. ಇನ್ನು ಚುನಾವಣೆ ಸಮಯದಲ್ಲಿ ನಡೆಯುವ ಮಹಾನ್ ಭ್ರಷ್ಟಾಚಾರ ತಡೆಯಲು ನಮ್ಮ ವ್ಯವಸ್ಥೆ ಸಕ್ಷಮ ಇಲ್ಲ. ಯಾಕೆಂದರೆ ಕೆಲವೇ ದಕ್ಷ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರ ತಡೆಯಲಾರರು.
ಚುನಾವಣೆಯಲ್ಲಿ ಭ್ರಷ್ಟ ವ್ಯವಹಾರ ಮಾಡುವವರು ರಾಜಕಾರಾಣಿಗಳು ಮತ್ತು ಅವರ ಜೊತೆ ಅಧಿಕಾರಿಗಳು ಶಾಮೀಲು ಆಗುವ ಉದಾಹರಣೆ ಇವೆ. ಇದರ ಪರಿಣಾಮ ಚುನಾವಣಾ ಭ್ರಷ್ಟಾಚಾರ ಅವ್ಯಾಹತವಾಗಿ, ನಡೆದು ಯಾರೇ ಗೆದ್ದರೂ ಅವರು ತಾವು ಖರ್ಚು ಮಾಡಿದ ದುಡ್ಡು ವಾಪಸ್ ಪಡೆಯುವ ಯೋಜನೆ ಮಾಡುತ್ತಾರೆ.
ಹಲವಾರು ಆಮಿಷಗಳಿಗೆ ಬಲಿಯಾದ ಮತದಾರ ಇನ್ನು ವಿವೇಚನೆ ಬಳಸಿ ಮತದಾನ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲ ಮತದಾರರು ಭ್ರಷ್ಟರು ಎಂದು ಸಾರಾಸಗಟಾಗಿ ಹೇಳುವದು ತಪ್ಪಾಗುವದು. ಆದರೆ ಗೆಲ್ಲಲು ಬೇಕಾದ ಕೆಲವು ಪ್ರತಿಶತ ಮತಗಳನ್ನು ಮೊದಲು ಕೊನೆ ಘಳಿಗೆಯಲ್ಲಿ ಮತದಾನದ ಹಿಂದಿನ ದಿನ ಆಮಿಷ ತೋರಿಸಿ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ಇಂದು ಚುನಾವಣೆ ಮೊದಲೇ ಏನೆಲ್ಲ ಉಡುಗರೆ ಕೊಡುತ್ತೇವೆ ಅಂತ ಈಗಲೇ ಘೋಷಣೆ ಮಾಡಿ ಚುನಾವಣೆ ಪ್ರಕ್ರಿಯೆಗೆ ಕಳಂಕ ತಂದಿದ್ದಾರೆ.
ಇನ್ನು ಚುನಾವಣೆ ನೀತಿ ಸಂಹಿತೆ ಕೇವಲ ಒಂದು ಔಪಚಾರಿಕ ಕಾನೂನು ಘೋಷಣೆ ಮಾತ್ರ ಹೊರತು ಅದು ಚುನಾವಣಾ ಅಕ್ರಮ ತಡೆಯುವಲ್ಲಿ ಎಷ್ಟು ಪರಿಣಾಮಕಾರಿ ಅನ್ನುವದು ಪ್ರಶ್ನಾರ್ಹ. ನೀತಿ ಸಂಹಿತೆ ಘೋಷಣೆ ಮೊದಲೇ ಈಗ ಮತದಾರರಿಗೆ ಹಲವಾರು ಕೊಡುಗೆಗಳ ಜಾಲ ಬೀಸಿ ಮತ ಖರೀದಿ ಕಾರ್ಯ ನಡೆದಿದೆ.
ಮುಂದೆ ತಮ್ಮ ಸರಕಾರ ಬಂದರೆ ಏನೆಲ್ಲ ಉಚಿತ ಭಾಗ್ಯಗಳನ್ನು ನೀಡುತ್ತೇವೆ ಅಂತ ಪೈಪೋಟಿಯಿಂದ ಪಕ್ಷಗಳು ಘೋಷಣೆ ಮಾಡುತ್ತವೆ. ಈ ಉಚಿತಗಳನ್ನು ಜನರ ತೆರಿಗೆ ಹಣ ಈ ರೀತಿ ಕೊಡುತ್ತಾರೆ. ಇದು ಪ್ರಶ್ನಾರ್ಹ. ಇಂದು ಯಾವದೇ ಪಕ್ಷ ಮತದಾರರನ್ನು ಆಮಿಷ
ಹರ್ಷದ ಕೊಳಿಗಾಗಿ ವರ್ಷದ ಕೊಳು ಕಳೆದುಕೊಳ್ಳಬಾರದು ಎನ್ನುವ ಗಾದೆಮಾತು ನೆನಪಿಸಿಕೊಳ್ಳುವುದು ಅಗತ್ಯ. ಯಾವ ಆಮಿಷಕ್ಕೂ ಬಲಿಯಾಗದೆ ದೋಚುವವರ ಬದಲು ಐದು ವರ್ಷ ಜನ ಹಿತ ಬಯಸುವ ಪ್ರತಿನಿಧಿ ಆಯ್ಕೆ ಮಾಡುವದು ಮತದಾರರ ಆದ್ಯ ಕರ್ತವ್ಯ. ಸಮಗ್ರ ಹಿತ ಬಯಸುವ ಪ್ರಾಮಾಣಿಕ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಆಯ್ಕೆಯಲ್ಲಿ ಪಕ್ಷದ ಅಥವಾ ಪಕ್ಷೇತರ ಪ್ರಾಮಾಣಿಕ ಅಭ್ಯರ್ಥಿಗೆ ಪ್ರಾಧಾನ್ಯತೆ ಕೊಡಬೇಕು.
ಕಾನೂನಿನಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ. ಯಶಸ್ವಿ ಪ್ರಜಾಭುತ್ವಕ್ಕೆ ಮತದಾರರ ಜಾಗೃತಿಯೇ ಜೀವಾಳ.