News

ಸರ್ಕಾರಿ ಅಸ್ಪತ್ರೆ ಚೆನ್ನಾಗಿದ್ದರೆ ಜನರೇಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ? ನ್ಯಾ. ಬಿ. ವೀರಪ್ಪ ಪ್ರಶ್ನೆ

Share It

ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಕಳಪೆ ಸೇವೆ ಕುರಿತಂತೆ ಸಾರ್ವಜನಿಕರಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿರುವ ಸೌಕರ್ಯಗಳನ್ನು ಪರಿಶೀಲಿಸಲು ನ್ಯಾ, ಬಿ. ವೀರಪ್ಪ ದಿಢೀರ್ ಭೇಟಿ ಕೊಟ್ಟಿದ್ದರು.

ಆಸ್ಪತ್ರೆಯ ಆಪರೇಷನ್ ಥಿಯೇಟರ್, ಮೆಡಿಕಲ್ ಸ್ಟೋರ್ ಮತ್ತಿತೆರೆಡೆ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳು ಸ್ವಚ್ಛತೆ ಕಾಪಾಡಿಕೊಳ್ಳದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗರಂ ಆದರು. ರೋಗಿಗಳಿಂದಲೂ ಆಸ್ಪತ್ರೆಯ ಸೇವೆಗಳ ಗುಣಮಟ್ಟದ ಕುರಿತು ಮಾಹಿತಿ ಪಡೆದುಕೊಂಡರು.

ಹಲವು ವೈದ್ಯರು ರಜೆಯಲ್ಲಿದ್ದುದನ್ನು ತಿಳಿದು ಗರಂ ಆದ ನ್ಯಾಯಮೂರ್ತಿಗಳು ಮೇಜರ್ ಕೇಸ್ ಗಳು ಬಂದರೆ ಏನು ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಜನರೇಕೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆಂದು ವೈದ್ಯರನ್ನು ಪ್ರಶ್ನಿಸಿದರು.

ನ್ಯಾಯಮೂರ್ತಿಗಳ ದಿಢೀರ್ ಭೇಟಿಯಿಂದ ಕಂಗಾಲಾಗಿದ್ದ ಆಸ್ಪತ್ರೆ ಸಿಬ್ಬಂದಿ ಸಮಜಾಯಿಸಿ ನೀಡಲು ಹೆಣಗಾಡಿದರು.


Share It

You cannot copy content of this page