ಬೆಂಗಳೂರು: ಕನ್ನಡ ಭಾಷೆಯಲ್ಲಿ ಕಾನೂನು ಸಂಬಂಧಿತ ಸುದ್ದಿ, ಲೇಖನಗಳನ್ನು ಪ್ರಕಟಿಸುತ್ತಿರುವ ಹಾಗು ಲಕ್ಷಾಂತರ ಓದುಗರ ನಂಬಿಕೆಗೆ ಪಾತ್ರವಾಗಿರುವ ‘ಲಾ ಟೈಮ್’ ಇದೀಗ ಆಸಕ್ತರಿಂದ ಲೇಖನಗಳನ್ನು ಆಹ್ವಾನಿಸುತ್ತಿದೆ.
ಸಾಮಾಜಿಕ ಕಾಳಜಿ ಹೊಂದಿರುವ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಇರುವ ನ್ಯಾಯಾಧೀಶರು, ವಕೀಲರು, ಕಾನೂನು ಪ್ರಾಧ್ಯಾಪಕರು ಹಾಗೂ ಕಾನೂನು ಪದವೀಧರರು ಲೇಖನ ಬರೆದು ಕಳುಹಿಸಬಹುದು. ‘ಕಾನೂನು’, ‘ನ್ಯಾಯಾಲಯಗಳ ತೀರ್ಪುಗಳು’, ‘ವಕೀಲ ಸಮುದಾಯ’, ‘ಸರ್ಕಾರಗಳ ನೀತಿ ನಿರೂಪಣೆ ಕುರಿತ ಮುಕ್ತ ವಿಶ್ಲೇಷಣೆ’ ಹಾಗೂ ‘ಸಾಮಾಜಿಕ ಹಿಸಾಸಕ್ತಿ’ಗೆ ಸಂಬಂಧಿಸಿದ ವಿಷಯದ ಮೇಲೆ ಲೇಖನ ಬರೆಯಬಹುದು.
ಲೇಖನ ಸಾಮಾನ್ಯ ಓದುಗರಿಗೂ ಸರಳವಾಗಿ ಅರ್ಥವಾಗುವಂತಿರಬೇಕು. ಲೇಖಕರ ವಿಳಾಸ, ಫೋನ್ ನಂಬರ್ ಒಳಗೊಂಡಿರಬೇಕು. ಯೂನಿಕೋಡ್ ನಲ್ಲಿ ಟೈಪ್ ಮಾಡಿದ ಲೇಖನಗಳನ್ನು lawtime18@gmail.com ಗೆ ಕಳುಹಿಸಬೇಕು. ಲೇಖಕರ ಹೆಸರು ಮತ್ತು ಫೋನ್ ನಂಬರಿನೊಂದಿಗೆ ಲೇಖನವನ್ನು ಪ್ರಕಟಿಸಲಾಗುವುದು.
ಭಾಷಾಂತರಕಾರರು ಬೇಕಿದ್ದಾರೆ: ‘ಲಾ ಟೈಮ್’ ಗೆ ಅರೆಕಾಲಿಕ ವರದಿಗಾರರು/ಭಾಷಾಂತರಕಾರರು ಬೇಕಾಗಿದ್ದಾರೆ. ಅರೆಕಾಲಿಕ ವರದಿಗಾರರು/ಭಾಷಾಂತರಕಾರರಿಗೆ ಶ್ರಮಕ್ಕೆ ತಕ್ಕಂತೆ ಗೌರವಧನ/ಸಂಭಾವನೆ ನೀಡಲಾಗುವುದು. ಪ್ರತಿ ವರದಿ/ಭಾಷಾಂತರಿಸಿದ ಲೇಖನಕ್ಕೆ ಕನಿಷ್ಟ ₹50 ರಿಂದ ಗರಿಷ್ಟ ₹2,000 ವರೆಗೆ ಗೌರವಧನ/ಸಂಭಾವನೆ ಪಾವತಿಸಲಾಗುವುದು. ಜತೆಗೆ ತಾವಿರುವ ಊರಿನಿಂದಲೇ ಕಾರ್ಯ ನಿರ್ವಹಿಸಬಹುದು. ಭಾಷಾಂತರಕಾರರಿಗೆ ಕನ್ನಡಕ್ಕೆ ಅನುವಾದ ಮಾಡುವಷ್ಟು ಇಂಗ್ಲಿಷ್ ಭಾಷೆ ತಿಳಿದಿರಬೇಕು. ಕಾನೂನು ವಿಷಯಗಳನ್ನು ಸರಳವಾಗಿ ಬರೆಯಲು ಗೊತ್ತಿರಬೇಕು. ಕನ್ನಡದಲ್ಲಿ ತಪ್ಪಿಲ್ಲದೆ ಬರೆಯುವ ಸಾಮರ್ಥ್ಯವಿರಬೇಕು. ಕಾನೂನು ಅಥವಾ ಪತ್ರಿಕೋದ್ಯಮದಲ್ಲಿ ಪದವಿ ಪಡೆದವರನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು. ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳೂ ಭಾಗವಹಿಸಬಹುದು. ಅರೆಕಾಲಿಕ ವರದಿಗಾರ/ಭಾಷಾಂತರಕಾರರಾಗಿ ಕಾರ್ಯ ನಿರ್ವಹಿಸಲು ಇಚ್ಚಿಸುವವರು lawtime18@gmail.com ಗೆ ತಮ್ಮ ಸ್ವವಿವರ ಕಳುಹಿಸಿಕೊಡಬಹುದು.