ಲೇಖಕರು: ಸಂಗಮೇಶ ಎಂ.ಎಚ್. ವಕೀಲರು, ಮೊ: 8880722220
ನಿಮ್ಮ ಜಮೀನು ಅಥವಾ ಮನೆ ಜಾಗ ಒತ್ತುವರಿ ಆಗಿದೆಯೇ ಒತ್ತುವರಿ ಆದ ಜಾಗ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಒತ್ತುವರಿ ಎಂದರೆ ಸಾಮಾನ್ಯವಾಗಿ ಬೇರೆಯವರ ಮಾಲೀಕತ್ವ ಹೊಂದಿರುವ ಜಾಗದಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿ ಆ ಜಾಗವನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳುವುದು ಮತ್ತು ಅದನ್ನು ತಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳುವುದು ಆ ಜಾಗದಲ್ಲಿ ತಮ್ಮ ಹಿಡಿತಕ್ಕೆ ತಗೆದು ಕೊಳ್ಳುವುದಕ್ಕೆ ಒತ್ತುವರಿ ಎಂದು ಹೇಳುತ್ತಾರೆ,
ಭೂ ಒತ್ತುವರಿಯನ್ನು ಕಾನೂನು ಬದ್ಧವಾಗಿ ಹೇಗೆ ನಿಭಾಯಿಸುವುದು?
ಕಾನೂನಿನ ಮೂಲಕ ಒತ್ತೂರಿ ಆದ ಜಾಗವನ್ನು ಹೇಗೆ ಹಿಂಪಡೆಯುವುದು?
ಭಾರತದ ವಿವಿಧ ರಾಜ್ಯಗಳಲ್ಲಿ ತಮ್ಮದೇ ಆದ ಭೂ ಅತಿಕ್ರಮಣ ಕಾಯ್ದೆಯನ್ನು ಜಾರಿಗೊಳಿಸಿವೆ, ಈ ಭೂ ಅತಿಕ್ರಮಣ ಕಾಯಿದೆ ಮೂಲಕ ಅತಿಕ್ರಮಣ ಅಥವಾ ಒತ್ತುವರಿ ಆದ ಜಾಗವನ್ನು ಮರಳಿ ಪಡೆಯುವುದು ಹೇಗೆ ಎನ್ನುವುದು ತಿಳಿಯೋಣ. ಸಾಮಾನ್ಯವಾಗಿ ಜಮೀನು ಅಥವಾ ಮನೆ ಜಾಗದ ಒತ್ತುವರಿ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕೆಂದು ಪ್ರತಿಯೊಬ್ಬ ಮಾಲೀಕನು ತಿಳಿದುಕೊಂಡಿರಬೇಕಾದಂತ ಸಂಗತಿ. ಭಾರತೀಯ ಕಾನೂನು ಅತಿಕ್ರಮಣ ಒತ್ತುವರಿಯನ್ನು ನಿಷೇಧಿಸುತ್ತದೆ ಮತ್ತು ಅತಿಕ್ರಮ ಮತ್ತು ಒತ್ತುವರಿಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಶಿಕ್ಷಿಸುತ್ತದೆ. ಪೊಲೀಸರಿಗೆ ದೂರು ನೀಡಿ ಐಪಿಸಿ 447ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ನ್ಯಾಯಾಲಯದ ಮುಖಾಂತರ ಅತಿಕ್ರಮಣ ದಾರಣಿಗೆ 550ರೂ ದಂಡ ಅಥವಾ ಮತ್ತು 3 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುವಂತೆ ಮಾಡಬಹುದು, ಅಪರಾಧಕ್ಕೆ ಅನುಗುಣವಾಗಿ ದಂಡ ವಿಧಿಸಬಹುದು.
ಭಾರತೀಯ ಭೂ ಅತಿಕ್ರಮಣ ಕಾಯ್ದೆ ಅಡಿಯಲ್ಲಿ ಜಮೀನಿನ ಮಾಲೀಕನು ಒತ್ತುವರಿಯನ್ನು ತಡೆಗಟ್ಟುವುದು ಹೇಗೆ ಮತ್ತು ಅತಿಕ್ರಮಣಕಾರರ ಅಭಿವೃದ್ಧಿ ಭಾರತೀಯ ಅಡಿಯಲ್ಲಿ ರಕ್ಷಿಸಿಕೊಳ್ಳುವುದು ಹೇಗೆ ಮತ್ತು ಕಾನೂನಿನ ವಿಧಾನಗಳು ಯಾವುವು ಎಂದು ತಿಳಿಯೋಣ.
ಯಾವುದೇ ಜಮೀನು ಅಥವಾ ಮನೆ ಜಾಗ ಮಾಲೀಕನಲ್ಲದೆ ಬಾಜುದಾರ ಅಥವಾ ಬೇರೊಬ್ಬ ವ್ಯಕ್ತಿಯು ಅತಿಕ್ರಮಣ ಅಥವಾ ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ತನ್ನ ಸುಪರ್ದಿಯನ್ನು ಸ್ಥಾಪಿಸಿಕೊಂಡು ಭೂ ಮಾಲೀಕನನ್ನು ಹೊರದೂಡುವುದು ಇದು ಒತ್ತುವರಿ ಅಥವಾ ಅತಿಕ್ರಮಣ ಎಂದು ಹೇಳಬಹುದು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಕಾನೂನಿನ ಮೂಲಕ ಒತ್ತುವರಿ ಆದ ಜಾಗ ಅಥವಾ ಜಮೀನನ್ನು ಮರಳಿ ಪಡೆಯಬಹುದು. ಅದು ಹೇಗೆ ಎಂದರೆ ಒತ್ತುವರಿ ಆದ ಜಮೀನು ಅಥವಾ ಜಾಗದ ಮಾಲೀಕನು ಸ್ಥಳೀಯ ನ್ಯಾಯಾಲಯದಲ್ಲಿ ಶಾಶ್ವತ ನಿರ್ಬಂಧಕಾಜ್ಞೆಯನ್ನು ಕೋರಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ತನ್ನ ಒತ್ತುವರಿ ಅಥವಾ ಅತಿಕ್ರಮವಾದ ಜಮೀನು ಅಥವಾ ಜಾಗವನ್ನು ಮರಳಿ ಪಡೆಯಬಹುದು.
ಒತ್ತುವರಿಯಾದ ಜಮೀನು ಅಥವಾ ಜಾಗವನ್ನು ಮರಳಿ ಪಡೆಯಬೇಕಾದರೆ ಒತ್ತುವರಿ ಆದ ಜಾಗ ಅಥವಾ ಜಮೀನು ಆ ಪ್ರದೇಶದ ವ್ಯಾಪ್ತಿಗೆ ಒಳಪಡುವ ಸಿವಿಲ್ ನ್ಯಾಯಾಲಯದಲ್ಲಿ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ದಾವೆ ಸಲ್ಲಿಸಬೇಕು.
ಶಾಶ್ವತ ನಿರ್ಬಂಧಕಾಜ್ಞೆ ಎಂದರೆ ಒತ್ತುವರಿ ಆದ ಜಮೀನನ್ನು ನ್ಯಾಯಾಲಯದ ಮೂಲಕ ಅದರ ಮಾಲೀಕ ಮರಳಿ ಪಡೆಯುವುದಾಗಿರುತ್ತದೆ.
ನಿರ್ಬಂಧಕಾಜ್ಞೆಯಲ್ಲಿ ಎರಡು ವಿಧ 1.ಶಾಶ್ವತ ನಿರ್ಬಂಧಕಾಜ್ಞೆ. 2.ತಾತ್ಕಾಲಿಕ ನಿರ್ಬಂಧಕಾಜ್ಞೆ.
ಶಾಶ್ವತ ನಿರ್ಬಂಧಕಾಜ್ಞೆ ಎನ್ನುವುದು ನ್ಯಾಯಾಲಯದಲ್ಲಿ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ದಾವೆ ಸಲ್ಲಿಸಿದ ನಂತರ ನ್ಯಾಯಾಲಯದ ವಿವಿಧ ಹಂತಗಳು ಮುಗಿದು ಅಂತಿಮ ವಿಚಾರಣೆ ಆಗಿ ಆದೇಶ ಹೊರಡಿಸುವುದನ್ನು ಶಾಶ್ವತ ನಿರ್ಬಂಧಕಾಜ್ಞೆ ಎನ್ನುತ್ತಾರೆ.
ತಾತ್ಕಾಲಿಕ ನಿರ್ಬಂಧಕಾಜ್ಞೆ ಎಂದರೆ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಸಂದರ್ಭದಲ್ಲಿ ತತ್‍ಕ್ಷಣ ಒತ್ತುವರಿಯನ್ನು ತಡೆಯುವುದಕ್ಕೆ, ಒತ್ತುವರಿಯಿಂದ ಉಂಟಾಗುವ ನಷ್ಟ ತಡೆಯಲು ತಾತ್ಕಾಲಿಕ ನಿರ್ಬಂಧಕಾಜ್ಞೆ ಆದೇಶವನ್ನು ಪಡೆಯಬಹುದು.