ಸುದ್ದಿ

ಲೋಕಸಭಾ ಚುನಾವಣೆ: ರಾಜ್ಯದ ನ್ಯಾಯಾಲಯಗಳಿಗೆ ಪ್ರತ್ಯೇಕ ದಿನಗಳಂದು ರಜೆ

Share It

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ಎರಡು ಪ್ರತ್ಯೇಕ ದಿನಗಳಂದು ರಜೆ ನೀಡಿ ಹೈಕೋರ್ಟ್ ಆದೇಶಿಸಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಆಯಾ ದಿನಗಳಂದು ಮತದಾನಕ್ಕೆ ಪೂರಕವಾಗಿ ಇದೇ ಏಪ್ರಿಲ್ 26 ರಂದು ಹಾಗೂ ಮೇ 7 ರಂದು ನ್ಯಾಯಾಲಯಗಳಿಗೆ ರಜೆ ನೀಡಲಾಗಿದೆ.

ಮೊದಲ ಹಂತದ ಮತದಾನ ನಡೆಯುವ ಜಿಲ್ಲೆಗಳ ವಿಚಾರಣಾ ನ್ಯಾಯಾಲಯಗಳಿಗೆ ಹಾಗೂ ಹೈಕೋರ್ಟ್ ನ ಬೆಂಗಳೂರು ಪ್ರಧಾನ ಪೀಠಕ್ಕೆ ಏಪ್ರಿಲ್ 26ರಂದು ರಜೆ ನೀಡಲಾಗಿದೆ.

ಅಂತೆಯೇ ಎರಡನೇ ಹಂತದ ಮತದಾನ ನಡೆಯುವ ಜಿಲ್ಲೆಗಳ ವಿಚಾರಣಾ ನ್ಯಾಯಾಲಯಗಳಿಗೆ ಹಾಗೂ ಹೈಕೋರ್ಟ್ ನ ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಮೇ 7 ರಂದು ರಜೆ ನೀಡಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ತಿಳಿಸಿದ್ದಾರೆ.

ಹೈಕೋರ್ಟ್ ರಜೆ ನೋಟಿಫಿಕೇಷನ್: ಜಿಲ್ಲಾ ನ್ಯಾಯಾಲಯಗಳ ರಜೆ ನೋಟಿಫಿಕೇಷನ್:


Share It

You cannot copy content of this page