ಕೊಪ್ಪಳ: ವಿಜಯಪುರ ಜಿಲ್ಲೆಯಲ್ಲಿ ನಡೆದಿರುವ ನ್ಯಾಯವಾದಿ ರವಿ ಮೇಗಳಮನಿ ಹತ್ಯೆ ಖಂಡಿಸಿ, ಕೊಪ್ಪಳ ಜಿಲ್ಲಾ ವಕೀಲರ ಸಂಘದಿಂದ ಇಂದು ಕೋರ್ಟ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ವ್ಯಕ್ತಪಡಿಸಲಾಯಿತು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ ಕಣವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಹಿರಿಯ ವಕೀಲರಾದ ಪೀರಾಹುಸೇನ ಹೊಸಳ್ಳಿ, ಡಾ. ಬಸವರಾಜ್ ಎಸ್. ಗಡಾದ, ಶಿವಾನಂದ ಹೊಸಮನಿ, ಮಾಳೆಕೊಪ್ಪ, ಉದಯಸಿಂಗ್, ಕೆ.ಎಸ್.ಬಿ.ಸಿ. ಸದಸ್ಯರಾದ ಆಸೀಫ್ ಅಲಿ ಇನ್ನಿತರ ಹಲವು ವಕೀಲರು ಮಾತನಾಡಿ ಹತ್ಯೆಯನ್ನು ಖಂಡಿಸಿದರು. ತಕ್ಷಣವೇ ಆರೋಪಿತರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ವಕೀಲ ರವಿ ಮೇಗಳಮನಿ ಹತ್ಯೆ ಮಾಡಿದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಬಿ.ವಿ ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಕಾರ್ಯದರ್ಶಿ ಸಂತೋಷ ಕವಲೂರ, ರಾಜಾಸಾಬ ಬೆಳಗುರ್ಕಿ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.